ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಪ್ರಕರಣ: ಹಾಲಪ್ಪ ನಿರ್ದೋಷಿ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಹರತಾಳು ಹಾಲಪ್ಪ ಅವರ ವಿರುದ್ಧ ಇದ್ದ ‘ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ’ಕ್ಕೆ ಸಂಬಂಧಿಸಿದ ಪ್ರಕರಣ ಸಂಬಂಧ ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ತೀರ್ಪನ್ನು ಪ್ರಕಟಿಸಿದ್ದು, ಪ್ರಕರಣದಲ್ಲಿ ದೂರಲಾಗಿರುವ ಆರೋಪಿ ನಿರ್ದೋಷಿ ಎಂದು ತೀರ್ಪಿತ್ತಿದೆ.
ತೀರ್ಪು ಪ್ರಕಟಿಸುತ್ತಿದ್ದ ವೇಳೆ ನ್ಯಾ.ಬಿ.ಜೆ.ರಮಾ, ಸಂತ್ರಸ್ತ ಮಹಿಳೆಯು ಆರೋಪಿ ವಿರುದ್ಧ ಸೂಕ್ತವಾದ ದಾಖಲೆಗಳನ್ನು ಒದಗಿಸದ ಕಾರಣ ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತಿದೆ. ಸಾಕ್ಷಿಗಾಗಿ ಸಲ್ಲಿಸಿರುವ ಬಟ್ಟೆಗಳ ಮೇಲೆ ಅವರ ಪತಿಯದ್ದೇ ವೀರ್ಯದ ಕಲೆಗಳಿದ್ದು, ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ದೃಢಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣವು 2009ರ ನ.26ರಂದು ಘಟನೆ ನಡೆದಿತ್ತಾದರೂ ಮೇ 2, 2010ರಂದು ಬಯಲಿಗೆ ಬಂದಿತ್ತು.

ಪ್ರಕರಣದ ವಿಚಾರಣಾ ಹಾದಿ:

ಸಂತ್ರಸ್ತ ಮಹಿಳೆಯ ಹೇಳಿಕೆ:
ಆರೋಪಿ ಹರತಾಳು ಹಾಲಪ್ಪನವರು ನನ್ನ ಪತಿಗೆ 2009ರ ನ.26ರ ಸಂಜೆ 8 ಗಂಟೆ ವೇಳೆಯಲ್ಲಿ ನನ್ನ ಪತಿಗೆ ಕರೆ ಮಾಡಿ ನಿಮ್ಮ ಮನೆಗೆ ಊಟಕ್ಕೆ ಬರುವುದಾಗಿ ತಿಳಿಸಿದ್ದರು. ಅದರಂತೆ ಮನೆಗೂ ಆಗಮಿಸಿದರು. ಅವರಿಗೆ ನನ್ನ ಪತಿ ಪಂಚೆ ನೀಡಿದರು. ಪ್ಯಾಂಟ್ ಕಳಚಿ ಪಂಚೆ ಉಟ್ಟುಕೊಂಡ ಆರೋಪಿ, ನನ್ನ ಪತಿಯೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ನಾನು ಮೇಲಿನ ಕೊಠಡಿಗೆ ತೆರಳಿ, ನೈಟಿ ಬಿಚ್ಚಿ ಕೇವಲ ಒಳ ಉಡುಪುಗಳೊಂದಿಗೆ ಮಲಗಿದೆ. ಕೂಡಲೇ ನಿದ್ದೆ ಹತ್ತಿತು. ಆದರೆ ಮಧ್ಯರಾತ್ರಿ ನನ್ನ ಮೇಲೆ ಯಾರೋ 10ರಿಂದ 15 ನಿಮಿಷಗಳವರೆಗೆ ಮಲಗಿದ ಅನುಭವವಾಯಿತು. ಅದು ನನ್ನ ಪತಿಯೇ ಎಂದು ಭಾವಿಸಿದ್ದೆ. ಆಗ ವೇಳೆ 3 ಗಂಟೆಯಿಂದ 3.30ರ ಸಮಯ ಇರಬಹುದು. ಹೊರಗಿನ ಬೀದಿ ದೀಪದ ಲೈಟ್ ಬೆಳಕಿನಿಂದ ನೋಡಿದಾಗ ನನ್ನ ಮೆಲಿದ್ದದ್ದು ಆರೋಪಿ ಎಂದು ತಿಳಿಯಿತು. ಕೂಡಲೇ ಜಾಡಿಸಿ ಒದ್ದೆ. ಈ ವೇಳೆ ಆರೋಪಿಯು ನನ್ನ ಪತಿಯನ್ನು ಮೆಡಿಕಲ್ ಗೆ ತೆರಳಿ ಔಷಧಿ ತರುವಂತೆ ಸೂಚಿಸಿ ಕಳುಹಿಸಿದ್ದರು. ಅದೇ ವೇಳೆಗೆ ನನ್ನ ಪತಿಯೂ ಆಗಮಿಸಿದರು. ಬಳಿಕ ನಾನು ಮತ್ತು ನನ್ನ ಪತಿ ಇಬ್ಬರೂ ಕೂಡ ಮೊಬೈಲ್ ಟಾರ್ಚ್ ಹಾಕಿಕೊಂಡು ಥಳಿಸಿದೆವು. ಕೂಡಲೇ ಆರೋಪಿ ತಮ್ಮ ಕಾರು ಚಾಲಕನೊಂದಿಗೆ ಪರಾರಿಯಾದ. ಮರುದಿನ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಡಿಜಿ ಅವರಿಗೆ ದೂರು ನೀಡಿದೆವು.

ಪತಿಯ ಹೇಳಿಕೆ:
ಹಾಲಪ್ಪ ಅವರು ಊಟಕ್ಕೆ ಬರುವುದಾಗಿ ದೂರವಾಣಿ ಮೂಲಕ ತಿಳಿಸಿದರು. ಅದರಂತೆ ನಾವೂ ಕೂಡ ಸಿದ್ಧತೆ ಮಾಡಿಕೊಂಡಿದ್ದೆವು. ಬಂದ ಕೂಡಲೇ ಅವರಿಗೆ ಪಂಚೆ ನೀಡಿದೆವು. ಅವರು ಪಂಚೆ ಉಟ್ಟ ಬಳಿಕ ನಾನು ಮತ್ತು ಆರೋಪಿ ಮಾತಿಗಿಳಿದೆವು. ಹೀಗ ಮಧ್ಯರಾತ್ರಿ ಆಯಿತು. ಆಗ ನನಗೆ ಔಷಧಿಯ ಅಗತ್ಯವಿದ್ದು, ತರುವಂತೆ ಸೂಚಿಸಿದರು. ಅದಕ್ಕಾಗಿ ನಾನು ಹೊರ ತೆರಳಿದ್ದೆ. ಬರುವಷ್ಟರಲ್ಲಿ ಆರೋಪಿಯು ನನ್ನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದ. ಈ ವೇಳೆ ನನ್ನ ಮಗ ತಿರುಮಲ ಎಂಬ ಲಾಡ್ಜ್ ನಲ್ಲಿದ್ದ. ಲಾಡ್ಜ್ ನ್ನು ಭವ್ಯ ಎಂಬುವವರ ಹೆಸರಿನಲ್ಲಿ ನನ್ನ ಸ್ನೇಹಿತ ಸತೀಶ್ ಎಂಬುವವನೇ ಬುಕ್ ಮಾಡಿದ್ದ(ಈ ಹೇಳಿಕೆಯನ್ನು ಖುದ್ದು ಸ್ನೇಹಿತ ಸತೀಶ್ ಎಂಬುವವರು ಕೋರ್ಟ್ ನಲ್ಲಿ ತಳ್ಳಿ ಹಾಕಿದ್ದರು.
ಪುತ್ರನ ಹೇಳಿಕೆ: ನಾನೂ ಕೂಡ ಘಟನೆ ನಡೆದ ದಿನ ಮನೆಯಲ್ಲಿಯೇ ಇದ್ದೆ.(ಮಗ ಭವ್ಯ ಎಂಬುವವರ ಜೊತೆ ಇದ್ದ ಬಗ್ಗೆ ದೃಶ್ಯಾವಳಿಗಳೂ ಕೂಡ ಕೋರ್ಟ್ ಗೆ ಲಭ್ಯವಾಗಿತ್ತು ಎನ್ನಲಾಗಿದೆ)

ಜಯದ ಬಳಿಕ ಹಾಲಪ್ಪ ಹೇಳಿಕೆ:
ಸತ್ಯ ಮೇವ ಜಯತೆ, ನಾನು ಕೋರ್ಟ್ ವಿಚಾರಣೆಗೆ ಎಂದಿಗೂ ತಪ್ಪಿಸಿಕೊಂಡವನಲ್ಲ. ಆದರೆ ಫಿರ್ಯಾದುದಾರರೇ ವಿಚಾರಣೆಗೆ ಸಮಯ ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ರಾಜಕೀಯ ಹುನ್ನಾರ ಇದ್ದಂತಿದ್ದು, ಇದನ್ನೂ ತನಿಖೆ ನಡೆಸಿ ಎಂದು ಹೈಕೋರ್ಟ್ ನನಗೆ ಜಾಮೀನು ನೀಡುವ ವೇಳೆಯಲ್ಲಿಯೇ ತಿಳಿಸಿತ್ತು. ನನಗೆ ಸಿಕ್ಕ ಈ ಜಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ತಿಳಿಸಿದ್ದು, ಅವರೂ ಕೂಡ ಖುಷಿಪಟ್ಟಿದ್ದಾರೆ. ಇನ್ನು ಮುಂದೆ ನಮ್ಮ ಪಕ್ಷದ ಹಿರಿಯರ ಮುಖಂಡರ ಮಾರ್ಗದರ್ಶನದೊಂದಿಗೆ ರಾಜಕೀಯದಲ್ಲಿ ಮುನ್ನಡೆಯುವೆ. ಇದೊಂದು ರಾಜಕೀಯ ಸಂಚು & ಸುಳ್ಳು ಪ್ರಕರಣ, ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ನನಗೆ ಏಳು ವರ್ಷ ಧೈರ್ಯ ತುಂಬಿದ, ಪ್ರಕರಣದ ಗೆಲುವಿಗೆ ಸಹಕರಿಸಿದ ವಕೀಲರಿಗೆ ಮತ್ತು ಬೆಂಬಲ ನೀಡಿದ ಇತರೆ ಪಕ್ಷದ ಮುಖಂಡರಿಗೂ ಕೂಡ ನನ್ನ ಧನ್ಯವಾದ. ಇದು ನ್ಯಾಯ & ಸತ್ಯಕ್ಕೆ ಸಿಕ್ಕ ಜಯ ಎಂದರು.

Leave a Reply

Your email address will not be published. Required fields are marked *