ಸಂಶೋಧನೆಯ ಪ್ರಕಾರ ಲೈಂಗಿಕ ಸಂಪರ್ಕಕ್ಕೆ ಸೂಕ್ತ ಸಮಯ ಯಾವುದು…?

ಗಂಡ ಹೆಂಡತಿ ಬಾಂಧವ್ಯದಲ್ಲಿ ಲೈಂಗಿಕ ಸಂಬಂಧ ಅತ್ಯಂತ ಪ್ರಮುಖವಾದದ್ದು. ಲೈಂಗಿಕತೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ ದಾಂಪತ್ಯದ ವಿರಸಕ್ಕೆ ಕಾರಣವಾಗಬಹುದು. ಆದರೆ, ಇದೀಗ ಹೊಸ ಸಂಶೋಧನೆಯೊಂದು ಲೈಂಗಿಕ ಸಂಪರ್ಕಕ್ಕೆ ಸೂಕ್ತ ಸಮಯ ಯಾವುದು ಎಂಬುದನ್ನ ಪತ್ತೆ ಮಾಡಿದೆ.

ಬೆಳಗಿನ ಜಾವ 7.30ರ ಸಮಯ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಂತ ಸೂಕ್ತ ಸಮಯ ಎನ್ನುತ್ತಿದೆ ಈ ಸಂಶೋಧನೆ. ಬೆಳಗ್ಗೆ ಎದ್ದ 45 ನಿಮಿಷದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಉತ್ತಮ ಸಮಯ. ರಾತ್ರಿ ಒಳ್ಳೆಯ ವಿಶ್ರಾಂತಿ ಪಡೆದಿರುವುದರಿಂದ ಈ ಸಂದರ್ಭ ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಾಮರ್ಥ್ಯ ಉತ್ತಮವಾಗಿರುತ್ತದೆಯಂತೆ. ರಕ್ತದೊತ್ತಡ ಮತ್ತು ಮಾನಸಿಕ ಒತ್ತಡವೂ ಸಮತೋಲನದಲ್ಲಿರುವ ಕಾರಣ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಳ್ಳೆಯ ಮೂಡ್ ಸೃಷ್ಟಿಸುತ್ತಂತೆ.

ಫ್ಲೋರ್ಜಾ ಸಪ್ಲಿಮೆಂಟ್ಸ್ ನಡೆಸಿದ ಈ ಸಂಶೋಧನೆಯಲ್ಲಿ 1000 ಮಂದಿ ಭಾಗವಹಿಸಿದ್ದರು. 9.30ರ ಬಳಿಕ ಅಂದರೆ ಹಾಸಿಗೆಯಿಂದ ಎದ್ದು 3 ಗಂಟೆ ಬಳಿಕ ಏಕಾಗ್ರತೆ ಪ್ರಮಾಣ ಹೆಚ್ಚಾಗಿರುವುದರಿಂದ ಕಚೇರಿಗೆ ಮತ್ತು ಕೆಲಸಕ್ಕೆ ತೆರಳಲು ಉತ್ತಮ ಸಮಯ ಎನ್ನಲಾಗಿದೆ.

Leave a Reply

Your email address will not be published. Required fields are marked *