ವಿವಾಹ ಸಮಾರಂಭದಲ್ಲಿ ಅಕ್ಷತೆ ಹಾಕುವುದು ಏಕೆ ?

ಮದುವೆಯಲ್ಲಿ ಅಕ್ಷತೆಯನ್ನು ವಧು- ವರರ ತಲೆಯ ಮೇಲೆ ಹಾಕುವುದು ದೇವತೆಗಳ ಕೃಪಾಧಾರೆಯ ಪ್ರತೀಕ. ಮದುವೆ ವಿಧಿಯಲ್ಲಿ ಉಪಯೋಗಿಸುವ ಅಕ್ಷತೆಗೆ ಕುಂಕುಮ ಹಚ್ಚಿರುತ್ತಾರೆ. ಕೆಂಪು ಕುಂಕುಮದ ಕಡೆಗೆ ಬ್ರಹ್ಮಾಂಡದಲ್ಲಿನ ಆದಿಶಕ್ತಿಯ ತತ್ವ ಆಕರ್ಷಿತವಾಗುತ್ತದೆ. ಆದ ಕಾರಣ ಈ ಅಕ್ಷತೆಯನ್ನು ವಧು-ವರರ ತಲೆ ಮೇಲೆ ಹಾಕುವುದರಿಂದ ವಧು-ವರರಲ್ಲಿನ ದೈವತ್ವ ಜಾಗೃತವಾಗಿ ಅವರಲ್ಲಿ ಸಾತ್ವಿಕತೆ ಹೆಚ್ಚಾಗುತ್ತದೆಯಂತೆ. ಅಲ್ಲದೆ ವಿವಾಹ ಸ್ಥಳದಲ್ಲಿ ಬಂದಿರುವ ದೇವ-ದೇವತೆಗಳ ಲಹರಿಗಳನ್ನು ಆಕರ್ಷಿಸುವ ಅವರ ಕ್ಷಮತೆ ಹೆಚ್ಚಾಗುತ್ತದೆ. ಅದರಿಂದ ಇಂತಹ ದೇವ-ದೇವತೆಗಳು ಉಪಸ್ಥಿತರಿರುವ ಈ ಸಮಾರಂಭದಿಂದ ವಧು-ವರರಿಗೆ ಲಾಭ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಅಕ್ಷತೆ ಹಾಕಲಾಗುತ್ತದೆ.

Leave a Reply

Your email address will not be published. Required fields are marked *