ಲೈಂಗಿಕ ಜೀವನ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?

ಸುಸೂತ್ರ ಲೈಂಗಿಕ ಜೀವನ ಉತ್ತಮ ದಾಂಪತ್ಯ ಜೀವನಕ್ಕೆ ದಾರಿ ಎನ್ನುತ್ತಾರೆ ತಿಳಿದವರು. ಆದರೆ ನಾವು ಸೇವಿಸುವ ಆಹಾರ, ನಮ್ಮ ದೈಹಿಕ ದೌರ್ಬಲ್ಯಗಳು ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಹುದು. ಹಾಗಾಗಿ ಸುಮಧುರ ಜೀವನಕ್ಕೆ ಎಂತಹ ಆಹಾರ ಸೇವಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಸ್ಥೂಲ ಕಾಯದವರಿಗೆ ಸುಗಮ ಸೆಕ್ಸ್ ಲೈಫ್ ಕಷ್ಟ. ನಿಮ್ಮ ಬೊಜ್ಜು ದೇಹ ಸಂಗಾತಿಗೆ ಮಾರಕವಾಗಬಹುದು. ಹೆಚ್ಚು ಸಿಹಿ ಪದಾರ್ಥ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುತ್ತಿದ್ದರೆ ದೇಹದಲ್ಲಿ ಬೊಜ್ಜು ಬೆಳೆಯುವುದಲ್ಲದೆ, ಇದು ನಿಮ್ಮ ಸೆಕ್ಸ್ ಲೈಫ್ ಗೆ ಅಡ್ಡಿಯಾಗಬಹುದು. ಅಷ್ಟೇ ಅಲ್ಲದೆ, ಕೆಲವು ವರದಿಗಳ ಪ್ರಕಾರ, ವಿಟಮಿನ್ ಹೇರಳವಾಗಿರುವ, ವಿಟಮಿನ್ ಇ ಅಂಶವಿರುವ ಆಹಾರ, ಒಣ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿದಂತೆ ನಿಮ್ಮ ಲೈಂಗಿಕ ಜೀವನ ಕುಂಠಿತವಾಗುವುದಂತೆ.

ನಿಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಆದಷ್ಟು ಸ್ಟ್ರಾಬೆರಿ, ಬಾದಾಮಿ, ಸೊಪ್ಪು ತರಕಾರಿ, ಕುಚ್ಚಿಲು ಅನ್ನದಂತಹ ಆಹಾರಗಳನ್ನು ಆದಷ್ಟು ಸೇವಿಸಿ. ಇದು ಲೈಂಗಿಕ ಜೀವನವನ್ನು ಸುಧಾರಿಸುತ್ತದೆ ಅಂತಾರೆ ತಜ್ಞರು.

Leave a Reply

Your email address will not be published. Required fields are marked *