ರಾಜಕಾಲುವೆ ಒತ್ತುವರಿ ತಪಾಸಣೆಗೆ ಹೊಸ ತಂಡ

ಬೆಂಗಳೂರು ನಗರದ ರಾಜಕಾಲುವೆ ಒತ್ತುವರಿ ಸಂಬಂಧ ತಪಾಸಣೆ ನಡೆಸಲು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು ಇಂದು ವಿಶೇಷ ತನಿಖಾ ತಂಡ ರಚಿಸಿದ್ದಾರೆ.

ಎಸ್ಪಿ ಲಕ್ಷ್ಮಿ ಗಣೇಶ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಒತ್ತುವರಿದಾರರು ಯಾರೇ ಆಗಿದ್ದರೂ ಕೂಡ ಸೌಮ್ಯತೆ ತೋರದೆ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಡಿಜಿಪಿ ಆದೇಶಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಂಡವು ನಾಳೆಯಿಂದ ಬೆಂಗಳೂರು ನಗರದ ಹಲವೆಡೆ ತಪಾಸಣೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಮಳೆ ಬಂದ ಪರಿಣಾಮ ನಗರದ ಹಲವಾರು ಮನೆಗಳಿಗೆ ಅಗಾಧ ಪ್ರಮಾಣದ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ಎಡಿಜಿಪಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *