ಮೋಡ ಬಿತ್ತನಾ ಕಾರ್ಯ ಯಶಸ್ವಿ: ಇಂದು ರಾತ್ರಿ ಮಳೆ ಸಾಧ್ಯತೆ

ಮೋಡ ಬಿತ್ತನೆಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ಕ್ರಮ ಕೈಗೊಂಡಿದ್ದು, ಯಶಸ್ವಿಯಾಗಿದೆ. ಹೌದು, ಸಂಜೆ 4 ಗಂಟೆ ಬಳಿಕ ರಾಮನಗರದತ್ತ ತೆರಳಿದ್ದ ವಿಮಾನ, ರಾಮನಗರದಲ್ಲಿ ಪ್ರಾಥಮಿಕ ಹಂತದ ಮೋಡ ಬಿತ್ತನೆ ಮುಗಿಸಿ ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ಗೆ ವಾಪಸ್ ಆಗಿದೆ.
ದೊರೆತಿರುವ ಮಾಹಿತಿ ಪ್ರಕಾರ, ಸುಮಾರು 50 ನಿಮಿಷಗಳ ಕಾಲ ರಾಮನಗರ ಸುತ್ತಮುತ್ತ ಮೋಡ ಬಿತ್ತನೆ ಮಾಡಲಾಗಿದ್ದು, ಇಂದು ರಾತ್ರಿ ಮಾಗಡಿ ಸುತ್ತಮುತ್ತ ಅಂದರೆ ಸುಮಾರು 20 ಕಿ. ಮೀ ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಮೋಡ ಬಿತ್ತನಾ ಕಾರ್ಯಕ್ಕೆ ಸಚಿವರಾದ ಹೆಚ್.ಕೆ.ಪಾಟೀಲ್, ಕೃಷ್ಣಭೈರೇಗೌಡ ಮತ್ತು ಎಂ.ಆರ್.ಸೀತಾರಾಂ ಸಾಥ್ ನೀಡಿದ್ದು, ವಿಮಾನದಲ್ಲಿ ಇವರೂ ಕೂಡ ಪ್ರಯಾಣ ಮಾಡಿ ಉಸ್ತುವಾರಿ ವಹಿಸಿಕೊಂಡಿದ್ದರು.
ಮೋಡ ಬಿತ್ತನೆಗೆ ಆರಂಭದಲ್ಲಿಯೇ ಅಡ್ಡಿ:

ಮೋಡ ಬಿತ್ತನೆಗೆ ಆರಂಭದಲ್ಲಿಯೇ ಅಡ್ಡಿ ಉಂಟಾಗಿತ್ತು. ಹೌದು, ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ನಲ್ಲಿ ವಿಮಾನ ಮೋಡ ಬಿತ್ತನೆಗಾಗಿ ಸಿದ್ಧವಾಗಿ ನಿಂತಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಬಳಿಕ ಹವಾಮಾನ ನೋಡಿಕೊಂಡು ವಿಮಾನ ಹಾರಿಸಲಾಯಿತು.

Leave a Reply

Your email address will not be published. Required fields are marked *