ಮುತ್ತೈದೆತನದ ಸಂಕೇತ ಬೆಳ್ಳಿ ಕಾಲುಂಗುರ: ವಿಶೇಷತೆ ?

ಪಾದಗಳ ಎರಡನೇ ಬೆರಳಿಗೆ ಕಾಲುಂಗುರ ತೋಡಿಸುವ ಪದ್ದತಿ ಹಿಂದಿನಿಂದಲೂ ಪ್ರಚಲಿತದಲ್ಲಿದ್ದು, ಎರಡೂ ಕಾಲಿನ ಬೆರಳಿನಲ್ಲಿ ಕಾಣುವ ಕಾಲುಂಗುರಗಳು ಹೆಣ್ಣಿನ ಮುತ್ತೈದೆತನದ ಸಂಕೇತಿಸುತ್ತವೆ.

ಮುತ್ತೈದೆತನಕ್ಕೆ ಸಾಕ್ಷಿ:

ಕೊರಳಿನಲ್ಲಿ ಮಾಂಗಲ್ಯ ಸೂತ್ರ, ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ ಇರುವಂತೆ ಕಾಲಿನಲ್ಲಿ ಕಾಲುಂಗುರ ಇರುವುದು ಹೆಣ್ಣಿನ ಮುತ್ತೈದೆತನಕ್ಕೆ ಸಾಕ್ಷಿ. ಕಾಲುಂಗುರವನ್ನು ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಕಾಲಿನ ಬೆರಳಿಗೆ ಹಾಕಲಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಮದುವೆಯ ಬೆಳಗ್ಗಿನ ಜಾವ ಮನೆಯಿಂದ ಹೊರಡುವ ಮುನ್ನ ಹೆಣ್ಣಿನ ಕಾಲು ಬೆರಳಿಗೆ ಕಾಲುಂಗುರವನ್ನು ತುಳಸಿ ಕಟ್ಟೆಯ ಎದುರಿನಲ್ಲಿ ತೋಡಿಸಲಾಗುತ್ತದೆ. ಇಂದಿಗೂ ಕೂಡ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಮದುವೆ ಪರಿಪೂರ್ಣವಾಗಬೇಕಾದರೆ ಕಾಲುಂಗುರ ಮುಖ್ಯ. ಇನ್ನು ಮದುವೆಯ ಸಂದರ್ಭದಲ್ಲಿ ಮದುಮಗನ ಕಾಲಿನಲ್ಲೂ ಕೂಡ ಈ ಕಾಲುಂಗುರ ಕಾಣಬಹುದು. ಇದು ಅವರವರ ಸಂಪ್ರದಾಯ, ಜಾತಿ, ಆಚರಣೆಗೆ ಸೇರಿರುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಮದುವೆಯ ಸಂದರ್ಭದಲ್ಲಿ ಮದುಮಗನು ಮದುಮಗಳ ಕಾಲಿನ ಬೆರಳಿಗೆ ಕಾಲುಂಗುರವನ್ನು ತೊಡಿಸುವ ಮೂಲಕ ಸಪ್ತಪದಿ ತುಳಿಯುತ್ತಾರೆ.

ಕಾಲುಂಗುರ ಧರಿಸಲು ವೈಜ್ಞಾನಿಕ ಕಾರಣ ?:

-ಕಾಲುಂಗುರ ಧರಿಸುವುದರಿಂದ ಪತಿಯ ಮನೆಗೆ ಶೋಭೆ ತರುವ ಜೊತೆಗೆ ಶುಭವಾಗುತ್ತದೆ.

-ಕಾಲುಂಗುರ ಬೆಳ್ಳಿಯದ್ದಾಗಿರುವ ಕಾರಣ ಮುತ್ತು ಸರಿಯಾಗಿ ಆಗುತ್ತದೆ.

-ಬೆರಳಿನ ಒಂದು ನರ ಗರ್ಭಕೋಶಕ್ಕೆ ನೇರ ಸಂಪರ್ಕ ಹೊಂದಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

-ದೇಹದ ಅಂಗಗಳು ಸದೃಢವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡಲಿದ್ದು, ಸಂತಾನೋತ್ಪತ್ತಿಗೂ ಕೂಡ ಸಹಕಾರಿ.

-ದೇಹದ ತಾಪವನ್ನು ಬೆಳ್ಳಿ ಕಡಿಮೆಗೊಳಿಸಲಿದ್ದು, ದೇಹವನ್ನು ತಂಪಾಗಿರಿಸುತ್ತದೆ.

-ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ಸ್ತ್ರೀಧರ್ಮದ ಅರಿವಾಗುತ್ತದೆ.

ಕಾಲುಂಗುರ ಸೌಂದರ್ಯವನ್ನೂ ಹೆಚ್ಚಿಸುತ್ತದೆ:

-ಸಮಾರಂಭಗಳಲ್ಲಿ ಸ್ವಲ್ಪ ದಪ್ಪನೆಯ ಮತ್ತು ಗಾತ್ರದಲ್ಲಿ ದೊಡ್ಡದಾದ ಕಾಲುಂಗುರ ತೊಟ್ಟರೆ ಚೆಂದವೆನಿಸುತ್ತದೆ.

-ಈ ಕಾಲುಂಗುರಗಳನ್ನು ಕಾಲ್ಗೆಜ್ಜೆ ಜತೆ ಮ್ಯಾಚ್ ಮಾಡಿಕೊಂಡು ಅದಕ್ಕೆ ಹೊಂದುವಂತ ನೇಲ್ ಪಾಲಿಷ್ ಹಚ್ಚಿಕೊಂಡರೆ ಕಾಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

-ದಿನನಿತ್ಯದ ಬಳಕೆಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಒಂದೇ ಸ್ಟ್ರಿಪ್ ನಾಜೂಕಾದ ಡಿಸೈನ್ ಕಾಲುಂಗುರ ಚೆಂದವೆನಿಸುತ್ತದೆ.

-ಫ್ಯಾಷನ್​ಪ್ರಿಯರು ಕಾಲುಂಗುರಗಳನ್ನು ಕಾಲಿನ ಎರಡು/ಮೂರು ಬೆರಳುಗಳಲ್ಲಿಯೂ ಧರಿಸಬಹುದು.

Leave a Reply

Your email address will not be published. Required fields are marked *