ಮುಖ್ಯ ಮಾಹಿತಿ ಆಯುಕ್ತರಾಗಿ ಸುಚೇತನಾ ಸ್ವರೂಪ್ ಆಯ್ಕೆ

ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮೈಸೂರು ಮೂಲದ ಪತ್ರಕರ್ತ ಸುಚೇತನಾ ಸ್ವರೂಪ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸ್ಥಾನದಿಂದ ಡಿ.ಎನ್‌. ನರಸಿಂಹರಾಜು ಅವರು ನಿವೃತ್ತಿಯಾಗಿದ್ದ ಪರಿಣಾಮ ಸ್ಥಾನ ಇಲ್ಲಿಯವರೆಗೂ ಕೂಡ ಖಾಲಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಾರ್ತಾ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಯಿತು.

ಸಭೆಯಲ್ಲಿ ಮೈಸೂರು ಮೂಲದ ಖ್ಯಾತ ಪತ್ರಕರ್ತ ಸುಚೇತನಾ ಸ್ವರೂಪ್ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಈಗಾಗಲೇ ಅಧಿಕೃತ ಆದೇಶ ಹೊರಡಿಸಿದ್ದು, ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಲಿದೆ. ಶಿಫಾರಸು ಪರಿಶೀಲಿಸಿದ ಬಳಿಕ ರಾಜ್ಯಪಾಲರು ನೇಮಕಾತಿ ಆದೇಶವನ್ನು ಹೊರಡಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಈ ಹಿಂದೆ ಮಾಹಿತಿ ಆಯುಕ್ತರಾಗಿ 1 ವರ್ಷದ ಅವಧಿಗೆ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *