ಪ್ರಭಾಸ್ ಜೊತೆ ಮುಂದಿನ ಚಿತ್ರದಲ್ಲಿ ರೊಮ್ಯಾನ್ಸ್ ಮಾಡೋ ಹುಡುಗಿ ಪಕ್ಕಾ!

ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಜನಪ್ರಿಯತೆ ಒಂದೇ ಸಲ ಉತ್ತುಂಗಕ್ಕೇರಿತ್ತು. ಇದೀಗ ಅವರು ರೊಮ್ಯಾನ್ಸ್ ಮಾಡಲಿರುವ ಹುಡುಗಿ ಯಾರೆಂಬ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ.

ರೊಮ್ಯಾನ್ಸ್ ಎಂದಾಕ್ಷಣ ನಿಜ ಜೀವನದಲ್ಲಿ ಅಂದುಕೊಳ್ಳಬೇಕಿಲ್ಲ. ಪ್ರಭಾಸ್ ನಿಜ ಜೀವನದಲ್ಲಿ ಇಷ್ಟು ಬೇಗ ಮದುವೆಯಾಗಲ್ಲವಂತೆ. ಅವರ ಮುಂದಿನ ಚಿತ್ರ ‘ಸಾಹೋ’ ವಿಷಯ.
ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಲ್ಲ ಎಂದ ಮೇಲೆ ಪ್ರಭಾಸ್ ನಾಯಕಿ ಯಾರಾಗ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ಚಿತ್ರತಂಡ ಉತ್ತರ ನೀಡಿದೆ. ಶ್ರದ್ಧಾ ಕಪೂರ್ ಪ್ರಭಾಸ್ ಜತೆ ತೆರೆ ಹಂಚಿಕೊಳ್ಳಲಿರುವುದು ಪಕ್ಕಾ ಆಗಿದೆ.

ಈ ಚಿತ್ರವು ಶ್ರದ್ಧಾ ಅವರ ಮೊದಲ ತ್ರಿಭಾಷಾ ಚಲನಚಿತ್ರವನ್ನು ಸೂಚಿಸುತ್ತದೆ. ನಂತರ ಮಾತನಾಡಿದ ಅವರು, ‘ಸಾಹೋ’ ತಂಡದ ಭಾಗವಾಗಿರಲು ಮತ್ತು ಪ್ರಭಾಸ್ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ! ಶ್ರದ್ಧಾ ಅವರಲ್ಲದೆ, ‘ಸಾಹೋ’ ಕೂಡ ಬಾಲಿವುಡ್ ನಟಿ ನೀಲ್ ನಿತಿನ್ ಮುಖೇಶ್ ಅವರನ್ನೂ ಸಹ ನಟಿಸುತ್ತಿದೆ. ಇವರು ಈಗಾಗಲೇ ಮುಂಬರುವ ಚಿತ್ರಕ್ಕಾಗಿ ಚಿತ್ರೀಕರಣ ಆರಂಭಿಸಿದ್ದಾರೆ. ಅಲ್ಲಿಗೆ ಸಾಹೋ ಹೀರೋಯಿನ್ ಬಗ್ಗೆ ಇದ್ದ ಅನುಮಾನಗಳಿಗೆ ತೆರೆ ಬಿದ್ದಿದೆ.

Leave a Reply

Your email address will not be published. Required fields are marked *