ಕರ್ನಾಟಕದಲ್ಲಿ ಮುಂದಿನ ಬಾರಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ: ‘ಸಿ ಫೋರ್’ ಸಮೀಕ್ಷೆ

‘ಸಿ ಫೋರ್’ ಸಂಸ್ಥೆ 2017ರ ಜುಲೈ 19ರಿಂದ ಆಗಸ್ಟ್ 10ರ ವರೆಗೆ ಕರ್ನಾಟಕದಲ್ಲಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತೊಮ್ಮೆ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಅದಿಕಾರಕ್ಕೇರಲಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ.
ರಾಜ್ಯಾದ್ಯಂತ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳನ್ನು ಹಾಗು ವಿವಿಧ ಧರ್ಮ, ಜಾತಿಯ ಜನರನ್ನು ಒಳಗೊಂಡ ಈ ಸಮೀಕ್ಷೆ ನಡೆಸಲಾಗಿದೆ ಎಂದು ‘ಸಿ ಫೋರ್’ ತಿಳಿಸಿದೆ. 2008 ಹಾಗೂ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ ಶೇ.99 ಸತ್ಯವಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ಗೆ ಶೇ.43, ಬಿಜೆಪಿಗೆ ಶೇ.32, ಜೆಡಿಎಸ್ಗೆ ಶೇ.17 ಹಾಗು ಇತರರಿಗೆ ಶೇ.8 ಮತಗಳು ಸಿಗಲಿವೆ.
ಕಾಂಗ್ರೆಸ್ 120 ರಿಂದ 132, ಬಿಜೆಪಿ 60 ರಿಂದ 72, ಜೆಡಿಎಸ್ 24 ರಿಂದ 30 ಹಾಗೂ ಇತರರು 1 ರಿಂದ 6 ಸ್ಥಾನ ಪಡೆಯಲಿದ್ದಾರೆ.

ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಶೇ.46, ಯಡಿಯೂರಪ್ಪ ಶೇ.27, ಕುಮಾರಸ್ವಾಮಿ ಶೇ.17ರಷ್ಟು ಮತದಾರರು ಒಲವು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಶೇ.44ರಷ್ಟು ಮತದಾರರು ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ ಮತ್ತು ಶೇ.29ರಷ್ಟು ಮತದಾರರಿಗೆ ತೃಪ್ತಿ ತಂದಿಲ್ಲ ಎಂದು ಸಮೀಕ್ಷೆಯಲ್ಲಿ ಬಯಲಾಗಿದೆ.

Leave a Reply

Your email address will not be published. Required fields are marked *