ಕರಿಮಣಿ & ಮಾಂಗಲ್ಯ ಸೂತ್ರದ ಮಹತ್ವ ಗೊತ್ತೇ ?

ಹಿಂದೂ ಧರ್ಮದಲ್ಲಿ ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೆ ಬಹಳ ಪಾಮುಖ್ಯತೆ ಇದೆ. ವಿವಾಹ ಸಂಕೇತವಾಗಿ ಸ್ತ್ರಿಯರು ಕರಿಮಣಿಯ ತಾಳಿ ಕಟ್ಟಿಕೊಳ್ಳುತ್ತಾರೆ.

ಶಿವನು ಪಾರ್ವತಿಗೆ ಮಂಗಲಸೂತ್ರವನ್ನು ಕಟ್ಟಿದ್ದನಂತೆ. ವಿವಾಹಿತ ಹೆಂಗಸಿನ ಮೇಲೆ ಕೆಟ್ಟದೃಷ್ಟಿ ಬೀಳದಿರಲೆಂದೇ ಮಂಗಳ ಸೂತ್ರದ ಕಟ್ಟಿಸಲಾಗುತ್ತದೆಯಂತೆ. ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿ ಇದ್ದು, ವಧುವನ್ನು ಮತ್ತು ಅವಳ ಕುಟುಂಬವನ್ನು ಸುರಕ್ಷಿತವಾಗಿಡುತ್ತದೆಯಂತೆ.

ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿಕೊಳ್ಳಬೇಕು ಎಂಬ ಆಶಯ ಇದರ ಸಂಪ್ರದಾಯವಾಗಿದೆ.

ಕರಿಮಣಿಸರದ ಮತ್ತೊಂದು ವೈಶಿಷ್ಟ ಎಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಎದೆಹಾಲು ಕೆಡುವುದಿಲ್ಲ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹಾನಂತರ ತಾಳಿ/ಕರಿಮಣಿಸರ ಧರಿಸುತ್ತಾರೆ.

ರಾಶಿ ಕರಿಮಣಿ

ಮೇಷ 21, ವೃಷಭ 40, ಮಿಥನ 34, ಕಟಕ 20, ಸಿಂಹ 18, ಕನ್ಯಾ 34, ತುಲ 40, ವೃಶ್ಚಿಕ 21, ಧನುಸ್ಸು 32, ಮಕರ 38, ಕುಂಭ 38, ಮೀನ 32.

Leave a Reply

Your email address will not be published. Required fields are marked *