ಐದು ವರ್ಷದಲ್ಲಿ 296 ಭಾರತೀಯರಿಗೆ ಪಾಕ್ ಪೌರತ್ವ!

ಕಳೆದ 5 ವರ್ಷಗಳಲ್ಲಿ 298 ಮಂದಿ ಭಾರತೀಯ ವಲಸಿಗರಿಗೆ ಪೌರತ್ವ ನೀಡಿರುವುದಾಗಿ ಪಾಕಿಸ್ತಾನ ಸಚಿವಾಲಯ ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಪಾಕ್ ನೀಡಿರುವ ಹೇಳಿಕೆ ಪ್ರಕಾರ, 2016ರಲ್ಲಿ 69 ಜನರಿಗೆ ಪಾಕಿಸ್ತಾನದ ಪೌರತ್ವ ಲಭ್ಯವಾಗಿದ್ದು, 2013ರಿಂದ ಅಲ್ಲಿನ ಪೌರತ್ವ ಪಡೆದಿರುವ ಭಾರತೀಯ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ತಿಳಿಸಿದೆ.

2012ರಿಂದ 2017ವರೆಗೆ ಒಟ್ಟು 298 ಭಾರತೀಯ ವಲಸಿಗರಿಗೆ ಪಾಕಿಸ್ತಾನದ ಪೌರತ್ವ ದೊರೆತಿದ್ದು, 2012ರಲ್ಲಿ 48, 2013ರಲ್ಲಿ 75, 2014ರಲ್ಲಿ 76, 2015ರಲ್ಲಿ 15, 2016ರಲ್ಲಿ 69 ಜನರಿಗೆ ಪೌರತ್ವ ನೀಡಿದ್ದೇವೆ.

ಭಾರತವಷ್ಟೇ ಅಲ್ಲದೇ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಬರ್ಮಾದ ವಲಸಿಗರೂ ಸಹ ಪೌರತ್ವ ನೀಡಿದ್ದೇವೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *